ಇನ್ನೂ ಹೆಚ್ಚು.........

ಇದು ಕನ್ನಡದ ಪ್ರಯೋಗ

Sunday, 1 July 2012

ಲಹರಿ

ಆ ಸದ್ದು ಕೇಳದಾಗಿದೆ ಲಹರಿ ನನ್ನವೆ ಆಗಿರುವಾಗ
ಆ ನೋಟ ಸ್ಪಷ್ಟವಾಗಿದೆ, ದೃಷ್ಟಿ ನನ್ನೊಳಗೆ ಬೆರೆತಿರುವಾಗ
ಆ ಮನಸು ಏನೋ ಹೇಳದು, ಭಾವನೆಗಳು ನನ್ನವೆ ಆಗಿರುವಾಗ
ಈ ರಾಗ ಶೃತಿಯ ಕೇಳದು, ಸ್ವರವು ಪದದಲ್ಲೇ ಬೆರೆತಿರುವಾಗ
                                                                                              
ಪ್ರತಿಪಲಿಸದು ಆ ಕಿರಣಗಳು, ಅಂದ ಸವಿಯೋ ಆಸೆ ಅದಕೆ
ಸಾಗರವ ಸೇರದು ಆ ಕಿರಣಗಳು, ನಿನ್ನ ಪಾದ ತೊಳೆಯೋ ಬಯಕೆ ಅದಕೆ
ನಿನ್ನಲೇ ಏಕೆ ಅಷ್ಟೂ ಚಂದ.. ಪ್ರಕೃತಿಯೇ ಬೇಡುವ ಅಂದ,
ಕೊಟ್ಟು ಹೋಗು ಚೂರು ನೋಡುತಿಲ್ಲ ಯಾರು

ಬೀಳಬಹುದು ಆ ತಾರೆಗಳು ನಿನ್ನ ಗುರುತ್ವಾಕರ್ಷಣೆಗೆ
ಕಾಣೆಯಾಗಿದೆ ಪ್ರತಿ ದಿನಗಳು, ನಿನ್ನ ಹುಡುಕೋ ಪರಿಗೆ
ಒಮ್ಮೆಕಂಡು ನೀ ಮರೆಯಾಗು, ಇರಲಿ ನಿತ್ಯ ನನ್ನ ಕೂಗು
ಪ್ರಕೃತಿಯೇ ನೀನು ಏಗು.. ದಿನವು ನೀನು ಅಂತೆಯೆ ಸಾಗು

Sunday, 1 April 2012

ಕತ್ತಲೆ ಕನಸು

ಸಗಣಿ ಒಣಗಿಸಿ  ಗಟ್ಟಿ ತಟ್ಟು ಭರಣಿ
ಕತ್ತಲೆ ಕನಸಿಗೆ ಆದ್ರೆ ಮಾಡು ದರಣಿ
ಕೋಡಂಗಿ ಯೋಚನೆಯ ದೊಡ್ಡ ಸರಣಿ
ಇವರು ಲೆಕ್ಕ ಪ್ರೀತಿಯ ಹುಚ್ಚೂ ಪ್ರಾಣಿ

ಒಂದೊಂದು ವಿಷಯಕ್ಕೂ ಒಂದೊಂದು ವರ್ಗ
ಜೀವನಾ ನೆಡೆಸೋಕೆ ನೂರೆಂಟು ಮಾರ್ಗ
definition ಇಲ್ಲದಿರುವ ಬೇಳೆ ಕಾಳು
nerve+sense ಇದರ daily ಗೀಳು

Ru tine+something ಅನ್ನೋದು ಬಾಳು
ಅದು ಇದು ಎಡವಟ್ಟು ಬೀಳು ಏಳು
Everyone is different ಯಾಕೆಲ್ಲಾ ಹಂಗೆ
ಕೆಲಸಕ್ಕೆ ಬರದಿರುವವನ ಮಾತೆಲ್ಲಾ ಹಿಂಗೆ
ಹುಟ್ಟು- ಕೆಲಸಾ- ಹೊತ್ತು, ಹುಟ್ಟಿಸಿ-ಬೆಳಸೀ ಸತ್ತೂ

Tuesday, 27 March 2012

ಯಾರು-ಏ ನು?

ಸೊನ್ನೇಲು ಕೆದಕೋನು ಮೇದಾವಿಯಂತೆ
ಸುಳ್ಳನ್ನೇ ಬೊಗಳೋನು ದೊಡ್ಡ ಕವಿಯಂತೆ
ಬೊಡ್ಡು ಬೊಡ್ಡುಗಳೆಲ್ಲಾ ಬುದ್ಧಿ ಜೀವಿಗಳಂತೆ
Extra ordinary ಆದೋನು ಕೆಟ್ಟ ಹುಚ್ಚನಂತೆ
ಸರಿಯಾಗಿ ಇರುವವನು ಸಮಾನ್ಯನಂತೆ.. ನಾನಂತೆ ನೀ ನಂತೆ

Dedication ಇಲ್ಲ.. determination.. ಟೊಳ್ಳ
ಸಮಾನ್ಯನಾದವನು ಇದನೆಲ್ಲ ಬಲ್ಲ
ನೂರೆಂಟು ಮಾತು, maths ಅಲ್ಲಿ weaku 
ಇಲ್ಲಿ ನಾನೇನೆ ರಾಜ, ಉಳಿದವರು Xಜ
Feelingಸೇ ಹೀರೋ, ಆದ್ರು freind ship zero
ನನಗಾಗೆ ಬದುಕು, ಹಾಗಾಗಿ ಎಲ್ಲಾರು ಬೇಕು

ಒಂಬತ್ತು ಭಾವ, self centred ಜೀವ
ಸಾದನೆಯು ಇಲ್ಲಾ, ವೇದನೆಯು ಇಲ್ಲಾ
matter ಇಲ್ದೇನೆ time ಹಾಳು ಮಾಡೋರು ಎಲ್ಲಾ
ಸಾಮಾನ್ಯ ಹೇಳೋದೆ, "ನಾನು ಸಾಮನ್ಯ ನಲ್ಲ"

ಇರೋ ರಾಜ ಇದು ಇಷ್ಟೇ ಅಲ್ಲ
ಅವರಿವರು ಹೇಳೋದ ಕೇಳೋಣ ಮೆಲ್ಲಾ  .
ನನಗೂ ನಿನಗೂ ಏನು ಗೊತ್ತಿಲ್ಲ
ನಾವು ಸಾಮಾನ್ಯರಲ್ಲೂ ಸಾಮಾನ್ಯರಲ್ವ?

Thursday, 16 February 2012

ತುಕ್ಕು ಪ್ರೀತಿ


ಅಯ್ಯೋ ಪಾಪ ಮುದ್ದು ಬಡವ heartu loveu ಮಾಡಿದೆ
lifeu ಚಿಂದಿ, ಹರಿದ ಲುಂಗಿ, ಒಗೆದು ಬಣ್ಣಾ ಬಿಟ್ಟಿದೆ
Night ಎಲ್ಲಾ, ನಿದ್ರೆ ಇಲ್ಲ, ಹಾಳು ರೋಗ ಅಂಟಿದೆ
ಮುಳ್ಳು ದಾರಿ, Am sorry, ತುಕ್ಕು ತಂತಿ ಚುಚ್ಚಿದೆ

ಎಂತ Torture, ಎಲ್ಲಾ puncture, stepney ಇಲ್ಲಾ ಆಗಿದೆ
ಒಂಟಿ Smileu, goods ರೈಲು, trak ಬಿಟ್ಟು ಸಾಗಿದೆ
ಹೊಸ ಹೊಸ ಗಾನ, ಯಕ್ಷಗಾನ, ಹಾಗೆ ನಿದ್ರೆ ಮಾಡಿದೆ
ಪ್ರೀತಿ ಜಾತ್ರೆ, Taste less ಮಾತ್ರೆ, ನೀರು ಕುಡಿದು ನುಂಗಿದೆ

ಯಾರಿಗೆ ಬೇಕು, ಅಣ್ಣಾ ಸಾಕು, ಇನ್ನೂ ಏನು ಉಳಿದಿದೆ?
ದೆವ್ರು ಎಲ್ಲಾ, ನೋಡ್ತಾನಲ್ಲಾ, ಚೂರು ಕರುಣೆ ಇಲ್ಲದೆ
Single ಜೀವನ, safeu ಪ್ರಯಾಣ Extra milage ನೀಡಿದೆ
sideu ಸರಕೋ, ಮುಂದೂ ಬರಕೋ, tune easy ಆಗಿದೆ

Saturday, 11 February 2012

ಯಾವುದು-ಗಳಿಗೆ ?


ಅರಿವಿಗೂ ಅರಿಯದ ಅಮಲಲಿ ತೇಲುತಿದೆ ಏನೊ? ಮನಸು
ಅಸಲಿಯೋ ನಕಲಿಯೋ ಅರಿಯೆನು ನಾ ಕಗ್ಗಂಟ ಬಿಡಿಸಿ ತಿಳಿಸು
ಯಾವುದು ಕನಸು?, ಯಾವುದು ನನಸು ಒಮ್ಮೆ ಸ್ಪಷ್ಟ ಪಡಿಸು
ನಾ ಅಲ್ಲಿ-ಇಲ್ಲಿ ಓಡುವ ಕೂಸು, ನೀ ತಳಿಸಿ-ತಣಿಸು||ಪ||

ಕ್ಷಮಿಸದಿರು ನನ್ನನು, ಮತ್ತೆ ಮಾಡುವ ಅದೇ ತಪ್ಪಿಗೆ
ಚೇಳಿಸು ನೀ ಹಾಗೆಯೆ, ಕೊಡದೆ ನಾ ಬೇಡುವ ಒಪ್ಪಿಗೆ
ಸುಮ್ಮನಿರಲು ಹೇಳು ನನ್ನ ನೋಡಿ ಮಿಟುಕುವ ಕಣ್ಣ ರೆಪ್ಪೆಗೆ
ನೂಕಿದೆ ಏನು?, ಬಿಳಲು ನಾನು, ಪ್ರೀತಿಯ ಸುಂದರ ಬಲೆಗೆ
ಬರುವುದಾದರು ಹೇಗೆ ಹೊರಗೆ?, ಇದ್ದು ಬಿಡುವೆ ಕಾಣದ ಹಾಗೆ||೧||

ತುಂಟ ಪೋಕರಿ ಒಳಗೆ, ಗೆಳತಿ ಬರುವ ಗಳಿಗೆ
ಸಹಿಸಲಾಗದು ತರಲೆ, ಹೆಚ್ಚು ಕೊಡದಿರು ಸಲಿಗೆ
ಮಾತು-ಮಾತಿಗಿಲ್ಲ ತೆರಿಗೆ, ಅವಳು ತಿರುಗಿ ನೋಡುವ ಪರಿಗೆ
ಕೊಂದೆಯ ಏನು?, ಸಾಯಲು ನಾನು! ಓರೆ ನೋಟದ ಚೂಪು ಗುಂಡಿಗೆ
ಬದುಕಲಾದರು ಸಾದ್ಯವು ಹೇಗೆ, ಇದ್ದು ಬಿಡುವೆ ಇರುವಾ ಹಾಗೆ||೨||

Friday, 6 January 2012

ಅಂದುಕೊಳ್ಳಲೆ?


ಅಂದುಕೊಳ್ಳಲೇ ಕಳೆದು ಹೋದೆನೆಂದು
ಚಳ್ಳೆ ಹಣ್ಣು ತಿನಿಸಿ ಅಡಗೀ ಕೊಂಡೆನೆಂದು
ಅಲ್ಲಿ, ಎಲ್ಲಿ ಎಲ್ಲೇ ನೋಡು ನಾ ಕಾಣೆನೂ
ನಿನ್ನ ಒಳಗೆ ಇರುವಾ ಗುಟ್ಟು ನಾ ಹೇಳೆನು ||ಪ||

ಕಳ್ಳನಂತೆ ಇರುವಾ ಬಯಕೆ ನಿನ್ನ ಕನಸದೋಚಿಕೊಂಡು
ದಡ್ಡನಂತೆ ಇದ್ದು ಬಿಡುವೆ ನಿನ್ನ ಮಾತು ಕೇಳೀಕೊಂಡು
ನೂರಎಂಟು ಆಸೆಗೆಲ್ಲಾ ನೀನೆ ಕಾರಣ
ಹೊಗುತಿದೆ ಮನಸು ಅಡ್ಡ-ದಿಡ್ಡಿ ಚಾರಣ||೧||

ಈ ಅಲೇಮಾರಿ ಮನಸಿಗೆ ನೀನೆ ಸರಿ ದಾರಿಯೂ
ನನ್ನ ಪುಟ್ಟ ಪುಟ್ಟ ಬರಹದ ಸಾರಂಶವೂ
ಎಷ್ಟೋ ಎಷ್ಟೋ ಪ್ರಶ್ನೆಗಳಿಗೆ ಇಲ್ಲ ಉತ್ತರ‍
ನನಗೆ ಯಾವ ಚಿಂತೆ ಎಲ್ಲ ನೀನು ಎರಲು ಹತ್ತಿರ||೨||

Saturday, 24 December 2011

ಆಕಾಂಶಿ
ಮರೆ ಮರೆತಿದೆ ನನ್ನೊಳಗಿನ ಮಾಯಲೋಕ
ನೀನೇನೋ ಮೋಡಿ ಮಾಡಿದೆ
ಪ್ರತಿಕ್ಷಣವು ವಿಸ್ಮಯವು ಏನೋ ಹೊಸದು
ಕಾಲಿ ಚಿತ್ರ ಮೂಡಿದೆ

ಯೋಚನೆಗೂ ನಿಲುಕದ ಮಾಯೆಯು ನೀನು
ನನ್ನೊಳಗೆ ಕೊರೆಯುತಿರುವ ಪ್ರಶ್ನೆಯು ನೀನು
ಅಡಗಿರುವ ಕನಸಿನ ಚಿಗುರೂ ನೀನು
ಅಚ್ಚರಿಯ ಅಚ್ಚರಿ ನೀನೆ ಏನು?

ನೀ ಕ್ಷಣಕ್ಷಣದ ಹೊಸತನದ ಪರಿಯು
ನಾ ಏನನ್ನೋ ಬಯಸುವ ಆಕಂಕ್ಷಿಯು
ಈ ಮನಸಾ ಮೌನದ ಹಾಡು ನೀನು
ರಾಗಗಳ ಆಚೆಗಿನ ಸ್ವರವೂ ನೀನು