ಇನ್ನೂ ಹೆಚ್ಚು.........

ಇದು ಕನ್ನಡದ ಪ್ರಯೋಗ

Saturday 24 December 2011

ಆಕಾಂಶಿ




ಮರೆ ಮರೆತಿದೆ ನನ್ನೊಳಗಿನ ಮಾಯಲೋಕ
ನೀನೇನೋ ಮೋಡಿ ಮಾಡಿದೆ
ಪ್ರತಿಕ್ಷಣವು ವಿಸ್ಮಯವು ಏನೋ ಹೊಸದು
ಕಾಲಿ ಚಿತ್ರ ಮೂಡಿದೆ

ಯೋಚನೆಗೂ ನಿಲುಕದ ಮಾಯೆಯು ನೀನು
ನನ್ನೊಳಗೆ ಕೊರೆಯುತಿರುವ ಪ್ರಶ್ನೆಯು ನೀನು
ಅಡಗಿರುವ ಕನಸಿನ ಚಿಗುರೂ ನೀನು
ಅಚ್ಚರಿಯ ಅಚ್ಚರಿ ನೀನೆ ಏನು?

ನೀ ಕ್ಷಣಕ್ಷಣದ ಹೊಸತನದ ಪರಿಯು
ನಾ ಏನನ್ನೋ ಬಯಸುವ ಆಕಂಕ್ಷಿಯು
ಈ ಮನಸಾ ಮೌನದ ಹಾಡು ನೀನು
ರಾಗಗಳ ಆಚೆಗಿನ ಸ್ವರವೂ ನೀನು

Sunday 13 November 2011

Doubt






ಹುಟ್ದಾಗಿಂದ ಒಂದು doubt ಹುಟ್ಟು ಬೇಗಾ ಸಾವು lateu..
ಯಾವುದಕ್ಕು ಇಲ್ಲ conclusion ಅರ್ದಂಬರ್ದ solution...

ನೆಡೆಯೋದಾರಿ fullu wrong... ಕೇಳೋಕಾಗದ mourn song...
straight ಆಗಿ ಇದ್ದು ಎಲ್ಲಾ ಡೊಂಕು... ನನ್ನ classಗೆ ನಾನೆ bunku..
ಆ ದೇವರ ಮೇಲು ನನ್ನ ಆಣೆ.. ನನಗೇ ಕಾಣದೆ ನಾನು ಕಾಣೆ..

ಇದ್ದಿದ್ದಕ್ಕೆ value ಇಲ್ಲ ಬೇಕಾಗೋದು ಸಿಗೋದಿಲ್ಲಾ...
ಮಾಮುಲಿ ಎಲ್ಲ ಬಿಟ್ಟಿ ಮಾತು.. patchಗಿಂತ ಜಾಸ್ತಿ ತೂತು
ಈ ರೆಕ್ಕೆ ಪುಕ್ಕ ಎಲ್ಲಾ ಸಾಕು ನಿವೂ ನಗ್ದೆ ಇದ್ರೆ ಇದು joku..

Thursday 3 November 2011

ಛೇ........





Concept ಇಲ್ದೆ ಬರೆದ  ಸಾಲು
ಕೇಳ ಬೇಡಿ ಇದರ ಗೂಳು
Lifeಉ ಹಂಗೆ ಆಗಿದೆ ನನ್ದು goale ಇಲ್ದೇನೆ
ಎಲ್ಲಾ ಗೋಲಿ ಹೊಡ್ತನೇ...


ನೋಡೆ ಇಲ್ಲ ಇಲ್ಲಿವರೆಗೆ ಯಾವ್ದು new-senseu
ಕಂಡಿದೆಲ್ಲ ಇಲ್ಲಿ ಅಲ್ಲಿ ಬರೀ non-senceu
ನೀವೇ ಹೇಳಿ ಹೊಸದು ಏನು?
ಎನೂ ಇಲ್ಲ ಬಿಟ್ಟು ನಾನು
ಮಾತು ಗೀತು ಎಲ್ಲ ಐಲು
route ಇಲ್ದೆ ಸಾಗೊ ರೈಲು


Fine ಆದ ಹಾಡಿಗೆ tuneಯೇ ಇಲ್ಲ
ಒನ್ದೆರೆಡು ಮಾತಿಗೆ time ಸಾಲಲ್ಲ
ನಾವು ನೀವು ಎಲ್ಲರು mad u
ಇವತ್ತು ಬಿಟ್ಟು ನಾಳೆ ನೋಡು.

Wednesday 2 November 2011

One Way story

one way loveವು ತುಂಬಾ ನೋವು
ತಲೆ ಕೆಟ್ಟು speed ಹೋದ್ರೆ ಕಂಡೀತ ಸಾವು
ನಾನು ಲೈಟಾಗಿ ಹುಚ್ಚ,over ಸಾಚ
ಎನೇನು ಹೇಳಿದ್ರು heart ಅಲ್ಲಿ ಬಚ್ಚ

silent ಹುಡುಗಿ, ಹೋಗಲ್ಲ ಕರಗಿ
devdas ಆಗೋದೆ ಕೊರಗೀ,ಕೊರಗಿ
ಆಗಾಗ ಕೊಡು ತಿದ್ಲು side viewಅಲ್ಲಿ looku
timeಅನ್ನ ಕಳೆಯೊಕೆ ನೆನಪಷ್ಟೆ ಸಾಕು
ಈ loveu ಗೀವು ಎಲ್ಲ ಯಾರಿಗೆ ಬೇಕು?

smile ಮೇಲೆ smile ಕೊಟ್ಟು, ಕೈ ಕೊಟ್ಳು dear..
peg ಮೇಲೆ peg ಏರಿಸಿ ಮುಗಿದು ಹೋಯಿತು bear
ಹಾಳದ ageu.,love meter gauge
ನೀರಲ್ಲೆ ಮಿಳುಗಿ ಹೋದೆ ಬರದೇನೆ ಈಜು....

Tuesday 1 November 2011

ದ್ವಂದ್ವ

ಮೌನ ಮನಸಿನ ಆಳ ಯೋಚನೆಗೆ ಶೂನ್ಯದಂತ ಭಾವ.
ಹುರುಳು ಜೀನದ ಕುರುಡು ಸತ್ಯವು ಸ್ಪಷ್ಠ ಒಂದೇ ದ್ವಂದ್ವ.

ಬರಡು ಭಾವನೆಗಳ ಮೇಲೆ ಕಣ್ಣೇರ ಹಾನಿಗಳದೆ ಚಿಲುಮೆ.
ಕವಲು ದಾರಿಯ ಸುತ್ತ ಬರಿ ಕಲ್ಪನೆಗಳದೆ ಕುಲುಮೆ.
ಸುಪ್ತ ಮನಸಿನ ಸುಳಿ ಯೊಳಗೆ ಸಿಲುಕಿನಲುಗುತಿದೆ ಆಶಾಕಿರಣ.
ದಟ್ಟ ಭರವಸೆಯ ಶಿಖರದೊಳಗೆ ಗುಪ್ತಗಾಮಿನಿಯ ಚಲನಾವಲನ.

ನಾನಾರೆಂಬುದ ತಿಳಿಯಲು ಹೋಗಿ ಸಿಲುಕಿದೆ ಇಲ್ಲದ ಗೊಂದಲದಲ್ಲಿ.
ಹೋಯಿತು ಮರೆತು ಆಡದ ಮಾತು ಬೇಡದ ಯೋಚನೆ ಗದ್ದಲದಲ್ಲಿ.
ಅರ್ಥವಾಗದ ವಿಷಯಗಳೆಲ್ಲವು, ಹೇಗೋ ಸಾಗಿದೆ ಜೀವನವು.
ನೋವು ನಲಿವುಗಳ ಸಾಗರವು.

ಕನಸು



ಬರುವ ಆಸೆ ಏಕೋ ಏನೋ ನಿನ್ನ ಕನಸಲಿ
ಇರುವ ಬಯಕೆ ಗೂಡು ಕಟ್ಟಿ ನಿನ್ನ ಮನಸಲಿ
ಬಾ ಎಂದು ನೀನೆ ಕರೆದು ಹೋದೆ ಏಕೆ ಹಾಗೆ ಸರಿದು
ಬಿಸಿಲಲ್ಲು ಮಳೆಯು ಸುರಿದು
ಭಾವನೆಗಳು ಏಲ್ಲೋ ಹರಿದು

ಬಿಟ್ಟು ಹೋದೆ ನೀ ನನಗೆ ನೆನಪುಗಳ ಕೊಡುಗೆ
ನೆಡೆಯುತಿರುವೆ ಅದರಲಲ್ಲೇ ಕೊನೆ ಇರದ ಕಡೆಗೆ
ಹನಿಜಿನುಗುವ ಮುನ್ನ ನೀ ಮಿಂಚಿ ಹೋದೆ ಸುಮ್ಮನೆ
ಮೋಡದಂತೆ ನೀನು ಸರಿದೆ ಕೊಡದೇನೆ ಸೂಚನೆ
ಮಳೆ ಬಿಸಿಲ ಮಿಲನದಲ್ಲಿ ಮೂಡಿದ ಬಿಲ್ಲೆ ಅಂದ
ಆ ಬಣ್ಣಗಳ ಬಣ್ಣನೆಗೆ ನಿನ್ನ ಹೋಲಿಕೆಯೆ ಚಂದ

ನೀ ಹೋದ ದಿನದಿಂದ ಪ್ರತಿದಿನವು ವರ್ಷದಾರೆ
ಹಾಗೆ ತೊಳೆದು ಹೋಗುತಿದೆ ನನ್ನ ಕಣ್ಣೀರ ತೊರೆ
ಈ ಕಲ್ಪನೆಗಳ ಕಾವು ನೀನು
ಈ ಮನ ಬಯಸುವ ಸ್ಪೂರ್ತಿ ನೀನು
ಹುಡುಕುತಿರುವೆ ನಿನ್ನನ್ನು ಮಂಜುಗಳ ನಡುವೆ
ಹೆಳದೆ ಕೇಳದೆ ನೀನು ಮರೆಯಾಗಿದ್ದು ಸರಿಯೆ?

ಮರೀಚಿಕೆ




ಸುಮ್ಮನೆ ಮಾತಿಗೇನು?, ಬಳಿ ಇದೆ ಪದಗಳ ಸಂತೆ
ನಿನ್ನ ವರ್ಣನೆಗೇಕೋ ಕಾಡಿದೆ ಅವುಗಳ ಕೊರತೆ
ಕುಳಿತರು ನಿಂತರು ನನಗೆ ಕಾಡಿದೆ ನಿನ್ನದೆ ಚಿಂತೆ
ಹೇಳಿದೆ ಮನಸು ಇಂದು ಗೀಚಲು ಇಲ್ಲದ ಕವಿತೆ ||ಪ||

ಹೋಲಿಸಲಾರೆನು ನಾ ನಿನ್ನ ಆ ಸೂರ್ಯ, ಚಂದ್ರ, ಚುಕ್ಕಿಗಳಿಗೆ
ಏನೆಂದು ಹೇಳಲಿ ಓ ಚಿನ್ನ
ಬಣ್ಣಿಸಲು ಸಾಲದು ಇರುವ ಗಳಿಗೆ
ಬಂದಂತೆ ಅನಿಸಿದೆ ನೀ ನನ್ನ ಬಳಿಗೆ
ಮಾಡಿದೆ ನನ್ನ ಕನಸಿನ ಸುಲಿಗೆ
ಹೋಗಲಿ ನಾನು ಎಲ್ಲಿಗೆ
ನೀನೆ ಹೇಳು ಮೆಲ್ಲಗೆ, ಓ ಮಲ್ಲಿಗೆ ||೧||

ಕೊಂದೆ ನೀನು ಪ್ರತಿ ಸಮಯ, ನಗುತಿದೆ ಕಾಲವು ಇಲ್ಲಿ
ಮಾಡಿದೆ ಮನಸಿಗೆ ಗಾಯ, ನಿನ್ನ ಚುಚ್ಚು ನೂಟದಲಿ
ತಿರುಗಿದೆ ಗಲ್ಲಿಗಲ್ಲಿಯಲಿ ನಿನ್ನ ಹುಡುಕಾಟದಲ್ಲಿ
ಆದೆಯ ನೀನು ಮರೀಚಿಕೆ, ಏಕೆ ನನ್ನಲಿ ನಾಚಿಕೆ||೨||