
ಸುಮ್ಮನೆ ಮಾತಿಗೇನು?, ಬಳಿ ಇದೆ ಪದಗಳ ಸಂತೆ
ನಿನ್ನ ವರ್ಣನೆಗೇಕೋ ಕಾಡಿದೆ ಅವುಗಳ ಕೊರತೆ
ಕುಳಿತರು ನಿಂತರು ನನಗೆ ಕಾಡಿದೆ ನಿನ್ನದೆ ಚಿಂತೆ
ಹೇಳಿದೆ ಮನಸು ಇಂದು ಗೀಚಲು ಇಲ್ಲದ ಕವಿತೆ ||ಪ||
ಹೋಲಿಸಲಾರೆನು ನಾ ನಿನ್ನ ಆ ಸೂರ್ಯ, ಚಂದ್ರ, ಚುಕ್ಕಿಗಳಿಗೆ
ಏನೆಂದು ಹೇಳಲಿ ಓ ಚಿನ್ನ
ಬಣ್ಣಿಸಲು ಸಾಲದು ಇರುವ ಗಳಿಗೆ
ಬಂದಂತೆ ಅನಿಸಿದೆ ನೀ ನನ್ನ ಬಳಿಗೆ
ಮಾಡಿದೆ ನನ್ನ ಕನಸಿನ ಸುಲಿಗೆ
ಹೋಗಲಿ ನಾನು ಎಲ್ಲಿಗೆ
ನೀನೆ ಹೇಳು ಮೆಲ್ಲಗೆ, ಓ ಮಲ್ಲಿಗೆ ||೧||
ಕೊಂದೆ ನೀನು ಪ್ರತಿ ಸಮಯ, ನಗುತಿದೆ ಕಾಲವು ಇಲ್ಲಿ
ಮಾಡಿದೆ ಮನಸಿಗೆ ಗಾಯ, ನಿನ್ನ ಚುಚ್ಚು ನೂಟದಲಿ
ತಿರುಗಿದೆ ಗಲ್ಲಿಗಲ್ಲಿಯಲಿ ನಿನ್ನ ಹುಡುಕಾಟದಲ್ಲಿ
ಆದೆಯ ನೀನು ಮರೀಚಿಕೆ, ಏಕೆ ನನ್ನಲಿ ನಾಚಿಕೆ||೨||
No comments:
Post a Comment