
ಬರುವ ಆಸೆ ಏಕೋ ಏನೋ ನಿನ್ನ ಕನಸಲಿ
ಇರುವ ಬಯಕೆ ಗೂಡು ಕಟ್ಟಿ ನಿನ್ನ ಮನಸಲಿ
ಬಾ ಎಂದು ನೀನೆ ಕರೆದು ಹೋದೆ ಏಕೆ ಹಾಗೆ ಸರಿದು
ಬಿಸಿಲಲ್ಲು ಮಳೆಯು ಸುರಿದು
ಭಾವನೆಗಳು ಏಲ್ಲೋ ಹರಿದು
ಬಿಟ್ಟು ಹೋದೆ ನೀ ನನಗೆ ನೆನಪುಗಳ ಕೊಡುಗೆ
ನೆಡೆಯುತಿರುವೆ ಅದರಲಲ್ಲೇ ಕೊನೆ ಇರದ ಕಡೆಗೆ
ಹನಿಜಿನುಗುವ ಮುನ್ನ ನೀ ಮಿಂಚಿ ಹೋದೆ ಸುಮ್ಮನೆ
ಮೋಡದಂತೆ ನೀನು ಸರಿದೆ ಕೊಡದೇನೆ ಸೂಚನೆ
ಮಳೆ ಬಿಸಿಲ ಮಿಲನದಲ್ಲಿ ಮೂಡಿದ ಬಿಲ್ಲೆ ಅಂದ
ಆ ಬಣ್ಣಗಳ ಬಣ್ಣನೆಗೆ ನಿನ್ನ ಹೋಲಿಕೆಯೆ ಚಂದ
ನೀ ಹೋದ ದಿನದಿಂದ ಪ್ರತಿದಿನವು ವರ್ಷದಾರೆ
ಹಾಗೆ ತೊಳೆದು ಹೋಗುತಿದೆ ನನ್ನ ಕಣ್ಣೀರ ತೊರೆ
ಈ ಕಲ್ಪನೆಗಳ ಕಾವು ನೀನು
ಈ ಮನ ಬಯಸುವ ಸ್ಪೂರ್ತಿ ನೀನು
ಹುಡುಕುತಿರುವೆ ನಿನ್ನನ್ನು ಮಂಜುಗಳ ನಡುವೆ
ಹೆಳದೆ ಕೇಳದೆ ನೀನು ಮರೆಯಾಗಿದ್ದು ಸರಿಯೆ?
No comments:
Post a Comment